trupthi

  • ಸಾಹಿತ್ಯ ಸೃಷ್ಠಿಸುವುದು‌ ನೀರು ಕುಡಿದಷ್ಟಯ ಸುಲಭವೇ?ಅಥವಾ, ನೀರು ಕುಡಿದಷ್ಟು ಸುಲಭವಾಗಿ ಬಂದರೆ ಅದು ಸಾಹಿತ್ಯವೇ? ಅಮ್ಮ ಸಾವಿರಬಾರಿ ಸಾರಿ ಸಾರಿ ಹೇಳಿದ್ದರು. ಹೆಸರಿಗಾದರೂ ಒಂದು ಉದ್ಯೋಗವಿರಬೇಕು. ಹರೆಯ. ಎಲ್ಲರೂ ಅನ್ನುವಂತೆ ಕುದಿಯುವ ರಕ್ತ ಎಂದು ಕರೆಯೋಣ ಬಿಡಿ. ಮಾತು ಕೇಳಲಿಲ್ಲ, ಕೇಳಿಸಿಕೊಂಡರೂ ಅರಿಯಲಿಲ್ಲ. ನನ್ನದೇನಿದ್ದರೂ ಸರಸ್ವತಿಯ ಪಾದಸೇವೆ ಎಂದು ಭಾಷಣ ಬಿಗಿದದ್ದೇ ಬಂತು. ಎಲ್ಲದಕ್ಕೆ ಸರಿಯಾಗಿ, ಮೂರ್ನಾಲ್ಕು ಪುಸ್ತಕಗಳು, ದಿನಪತ್ರಿಕೆಯ ಇಡೀ ಪುಟದಲ್ಲಿ ಒಂದು ವಿಮರ್ಶೆ ಮುದ್ರಗೊಳ್ಳುವಷ್ಟುಹೆಸರು ಮಾಡಿದ್ದಾಯಿತು. “ಎರಡು ವರ್ಷ ಆಯಿತು. ಒಂದು ಪುಸ್ತಕ ಬಿಡುಗಡೆ…

    Read more →

  • ಮುಳ್ಳು

    ಕಾಲೊಳು ಸೇರಿದ ಮುಳ್ಳು, ನನ್ನೊಳಗೊಂದಾಗಿ ಕಳೆಯಿತು, ಹಲವು ವರ್ಷ. ಮುಳ್ಳೋ? ಎಸೆದು ಬಿಡು ಎಂಬುವರು ಎಲ್ಲರು. ಅದ್ಹೇಗೆ ಸಾಧ್ಯ? ನನ್ನ ಕಾಲು ಬೀಗಿ, ಕುಂಟುತ್ತಾ ನಡೆವಾಗಲೆಲ್ಲ, ಕುಂಟಿ ನಡೆದು ,‌ಮಾಂಸ ಖಂಡಗಳು ಸುಡುವಾಗಲೆಲ್ಲ, ಮುಳ್ಳೇ ಬಂದು ಸಾಂತ್ವನ ಹೇಳಿದ ಭಾವ. ಮುಳ್ಳಿಗೆ ಪದಗಳ ಮೇಲೆ ಹಿಡಿತವಿಲ್ಲ. ಹಿಡಿತವಿಲ್ಲವಾದರೂ ನನ್ನಂತೆ ಕವಯಿತ್ರಿ ಎಂದು ನಟಿಸುವುದಿಲ್ಲ. ಅದೆಷ್ಟು ಬಾರಿ ಬೇಸರದಿಂದ ಬಳಲಿದ್ದೇನೇ: ತನ್ನೆಲ್ಲವನ್ನು ಬಿಟ್ಟು , ನನ್ನ ಕಾಲು ಕೊಕ್ಕಿ ಅದೆಂತ ಹಿಂಸೆಯಾಗಬೇಕು, ಮುಳ್ಳಿಗೆ? ಮುಳ್ಳಿನ‌ ಸಾಂಗತ್ಯ ನನ್ನ ಜೀವನದ…

    Read more →

  • ನಾನು ಮನೆ.‌ ವೆಂಕಟೇಶನ ಮನೆ. ವೆಂಕಟೇಶ ಎಂದು ಅವನಿಗೆ ಯಾರೂ ಕರೆಯುವುದಿಲ್ಲ, ಮನೆ ಮಂದಿ ಅಪ್ಪ ಎಂದರೆ, ಊರವರು, ವೆಂಕ್ಟ, ಎಂಕ್ಟ, ವೆಂಕಟೇಶ್ ಎಂದು ಕರೆಯುತ್ತಾರೆ ನನ್ನಲ್ಲಿಗೆ ಬರುವವರು ಬಹಳಷ್ಟು ಜನ. ಊಟ ಮಾಡಿ, ನಿದ್ರೆ ಮಾಡಿ,‌‌ ಎದ್ದು‌ ನಡೆದು ಬಿಡುವರು.‌ ಎಂದು ಕಿರುಚಿದ್ದು ಕೇಳಿತೋ, ಇಲ್ಲವೋ ತಿಳಿಯದು. ಮತ್ತೊಮ್ಮೆ ಬರುವವರು ಕೆಲವೇ ಕೆಲವು ಮಂದಿ.‌ ಆದರೆ, ಆ ಕೆಲವು ಮಂದಿ, ಹಲವು ಬಾರಿ ಬರುತ್ತಾರೆ.‌ ಅವರೆಲ್ಲರ ಹೆಸರು ಗೊತ್ತಿಲ್ಲದಿದ್ದರೂ, ಅವರ ಹೆಜ್ಜೆಗಳು ನನ್ನ ಅನುಭವಕ್ಕೆ ಬರುತ್ತವೆ.…

    Read more →

  • “ಕಹಿಯಿಲ್ಲದ ಮದ್ದೂ‌ ಮದ್ದೇ? “ ಬಾಯೊಳಗಿಳಿಸಿದ ಗುಳಿಗೆಯನ್ನು ಸವಿಯುತ್ತಾ ನುಡಿದಳು. “ಹಬ್ಬದ ಗುಡ್ಡೆಯ ಸಕ್ಕರೆ ಮಿಠಾಯಿ ತರದ ಮಾತ್ರೆ ಬಂದರೆ, ಆ ಮಾತ್ರೆಗೆ ಎಲ್ಲಿಯ ಗೌರವ. ಕಾಯಿಲೆಗೆ ಎಲ್ಲಿಯ ಗೌರವ? ಕಹಿಯಿಲ್ಲದ ಮಾತ್ರೆ ಮಾತ್ರೆಯೇ‌‌ ? ಎಂಥಾ ಕಾಲ!” ಅವಳಪ್ಟೇ ಎತ್ತರದ ಅಲ್ಮೆರಾದ ಮೇಲೆ ಇದ್ದ ಔಷಧಿಗಳು ಒಂದೇ‌ ಎರಡೇ? “ನೂರಾ ನಲವತ್ತ ನಾಲ್ಕು, ನೂರಾ ನಲವತ್ತ ಐದು.‌ ಅಯ್ಯಪ್ಪ! ನನ್ನ ಕೈಲಿ ಆಗುವಂತೆ ಕಾಣತ್ತಿಲ್ಲ! ” ಆಕೆಯ ಮಾತ್ರೆಗಳನ್ನು ಲೆಕ್ಕ ಮಾಡುತ್ತ ಮಾಡುತ್ತ,‌ ಸುಸ್ತಾದ‌ ಮೊಮ್ಮಗ,…

    Read more →

  • ಕಥೆ!

    ಮನೆಯ ಜನರದೊಂದು ಕಥೆಯಾದರೆ, ಮನೆಯದೇ ಇನ್ನೊಂದು ಕಥೆ! ಮನೆ ತನ್ನ ಕಥೆಯನ್ನು ಮನೆಯ ಜನರಿಗೆ ಹೇಳಹೊರಟರೆ, ಜನ ಸಬೂಬು ನೀಡುವರು, ಈಗ ಬಂದೆನೆಂದು ಆಗ ಮನೆಬಿಟ್ಟವರು ಬಿಟ್ಟೇ ಬಿಟ್ಟರು . ಮನೆ ಕಾದದ್ದೇ ಬಂತು‌. ಹಲವುದಿನ ಕಳೆದನಂತರ, ಮನೆಯ ಜನ ಮತ್ತೆ ಬಂದರು‌. ಇನ್ನೂ ಇಬ್ಬರ ಕರೆತಂದರು‌. ಮನೆ ಋಷಿಯಲ್ಲಿ ಹಿಗ್ಗಿದ್ದೇ ಹಿಗ್ಗಿದ್ದು‌. ಮನೆಯ ಜನ ಕೆಲವೇ ನಿಮಿಷಗಳಲ್ಲಿ ವಾಪಾಸು ಹೊರಟಾಗ ಮೂಡದಿರದೇ ಪ್ರಶ್ನೆ ? “ಬಾಡಿಗೆಯವರು” ಮನೆಯ ಜನ ಗಸಿಗಸಿ ನಕ್ಕರು. ಕಥೆ ಕೇಳುವ ಮನಸ್ಸಿದ್ದಂತೆ…

    Read more →