ಮನೆಯ ಜನರದೊಂದು ಕಥೆಯಾದರೆ, ಮನೆಯದೇ ಇನ್ನೊಂದು ಕಥೆ!

ಮನೆ ತನ್ನ ಕಥೆಯನ್ನು ಮನೆಯ ಜನರಿಗೆ ಹೇಳಹೊರಟರೆ, ಜನ ಸಬೂಬು ನೀಡುವರು, ಈಗ ಬಂದೆನೆಂದು ಆಗ ಮನೆಬಿಟ್ಟವರು ಬಿಟ್ಟೇ ಬಿಟ್ಟರು . ಮನೆ ಕಾದದ್ದೇ ಬಂತು. ಹಲವುದಿನ ಕಳೆದನಂತರ, ಮನೆಯ ಜನ ಮತ್ತೆ ಬಂದರು. ಇನ್ನೂ ಇಬ್ಬರ ಕರೆತಂದರು. ಮನೆ ಋಷಿಯಲ್ಲಿ ಹಿಗ್ಗಿದ್ದೇ ಹಿಗ್ಗಿದ್ದು. ಮನೆಯ ಜನ ಕೆಲವೇ ನಿಮಿಷಗಳಲ್ಲಿ ವಾಪಾಸು ಹೊರಟಾಗ ಮೂಡದಿರದೇ ಪ್ರಶ್ನೆ ? “ಬಾಡಿಗೆಯವರು” ಮನೆಯ ಜನ ಗಸಿಗಸಿ ನಕ್ಕರು. ಕಥೆ ಕೇಳುವ ಮನಸ್ಸಿದ್ದಂತೆ ಕಂಡರೂ ಬಾಡಿಗೆದಾರ “ಜನರಿಗೆ” ಕಿವಿ ಕೇಳಿದಂತಿಲ್ಲ. ಮನೆಯ ಅರ್ಧದಲ್ಲೇ ನಿಂತ ಕಥೆ ನಿಂತೇ ಇದೆ!

Leave a Reply