ಮನೆಯ ಮಂದಿಯ ತೊರೆದು
ಧನಕೆ ನೀರನು ಎರೆದು
ಆಟ ಚೇಸ್ಟೆಯ ಮರೆಯೆ ನಿನ್ನ ಜಪ
ತಪದಲಿ ಮುಳುಗಿರಲು ನೆನೆದು
ಹೊರ ಮನದ ಮರಣವ ಕರೆದು
ಒಳಗಿದಕೆ ತೆರಣವ ತರಿಸಿ
ಕೈಹಿಡಿದು ಕರೆದೊಯ್ಯಬೇಕಿದೆ
ಜೀವರಸವಾರುವಮುನ್ನವೇ
ಹುಚ್ಚುತನವೆನ್ನುವರು ಕೆಲವರು
ಏನನ್ನದೇ ನಕ್ಕು ನಡೆವವರು ಹಲವರು
“ಎಲ್ಲಿಬಂದಿರುವ ? ಯಾರಿಗೊಲಿದಿರುವ?
ಎಷ್ಟು ದೀಪವು ಆರಿದೆ ಮಂತ್ರಘೋಷದಲಿ!”
ಸಾಸಿರದಲಿ ಸರ್ವರೂ ಬಾರೆನೆಂಬುವರೇ?
ಜಪಿಸಿ ಜಪಿಸಿ ಉಸಿರನೆರೆವೆ ಕ್ಷಣಕೆ
ಬಹಳ ಮೊದಲು ಎಂದಾದರೂ
ಸಾಸಿರದಲಿ ಒಬ್ಬನೂ ಬಾರನೇ?
ಮತ್ತೊಮ್ಮೆಯಿರಲಿ
ಸಾಸಿರದಲಿ ಒಬ್ಬನೂ ಬಾರನೇ?
ಬರೆದದ್ದು : ಮೇ ೪, ೨೦೧೫

Leave a Reply