ಪದ್ಯ
-
ಅದೆಲ್ಲಿ ಹೋಯಿತು ನನ್ನ ಮನೆ?ಸಂವತ್ಸರ ಹೊತ್ತು ಸಹಿಸಿ, ಜರ್ರನೆ ಕೈಜಾರಿ ಬಿದ್ದುಲೋಟದ ಹಾಲು ನೆಲವೆಲ್ಲಹರಿದು, ಅಂಟು ಅಂಟಾಗಿ,ಊರ ಇರುವೆಗಳನೆಲ್ಲ ಸೆಳೆಯುವಾಗ,ತುಟಿ ಪಿಟಕ್ಕೆನ್ನದ ನನ್ನ ಮನೆ ನನ್ನಂತೆ ವಯಸ್ಸಾಗಿ,ವಯಸ್ಸನ್ನು ಮರೆಸಲು ಬಣ್ಣವನು ಬಳಿದು,ಮೂಲೆ ಮೂಲೆಯಲ್ಲಿ ಮೊಳೆಯಕೊರೆತವನು ಸಹಿಸಿಬೈದರೂ ತುಳಿದರೂಮನ ಬಂದಲ್ಲಿ ಉಗುಳಿದರೂಕಮ್ಮಿಯಾಗದ ವಿಪರೀತದಪ್ರೀತಿಯ ಮನೆಪ್ರೀತಿಸುವ ಮನೆ ಕನಸಲ್ಲಿ ದಿಕ್ಕುಪಾಲಾಗಿಎದ್ದು ಗೋಡೆಗೆ ತಲೆ ತಾಗಿಕೋಪದಿ ಇದೇನು ಗೋಡೆಯೋ ಕಾಣೆನೆಂದುಬೈದರೂ, ಗುಂಯ್ ಕಂಪಿಸುವ ಮನೆ ಕಿಟಕಿಗೆ ತುಕ್ಕು ಹಿಡಿದುಹಿಡಿದ ತುಕ್ಕಿಗೆ ಬಣ್ಣ ಬಳಿದುಸರಳೆಲ್ಲ ಬೊಬ್ಬೆಯೋ ಎಂಬಂತೆಅಲುಗದೇ ಕುಳಿತ ಮನೆ. ಅಲ್ಮೆರಾದ ಅಡಿಯೆಲ್ಲಒರಸೋ…
-
ರಾತ್ರಿ ಕಳೆದು ಬೆಳಕು ಹರಿಯುವಲಿ ರಾಶಿ ರಾಶಿ ನಕ್ಷತ್ರ ಕಾಲದಲೆಯ ಇಳಿತ ಭರತದಲಿ ಮಿಂದು ಮುರಿದ ನಕ್ಷತ್ರ ಉಸಿರು ಬಸಿರು ನಿಂತ ಘಳಿಗೆ ಕೆಸರು ಹೆಸರ ಮೇಲೆ ಕೆಳಗೆ ನೀರು ಹೀರಿ ಗಾಳಿ ಹಾರಿ ನಿರ್ವಾತವೆ ಕೊನೆಯ ದಾರಿ ನೀರ ಅರಿಲ್ ನೆಲಕೆ ಬರಲ್ ದಾರಿಯೆಲ್ಲ ಅರಿಲ್ ಅರಿಲ್ ಹೊಕ್ಕ ನಾನು ದಾರಿಯಲ್ಲಿ ಹೆಕ್ಕಿ ತಂದೆ ಸೀರೆಯಲ್ಲಿ ನಕ್ಷತ್ರವು ನೆಲದ ಮೇಲೆ ಆಕರ್ಶಿತ ಜನರ ಸಾಲೆ ಹೆಕ್ಕಿ ನೆಕ್ಕಿ ನಡೆದು ಕುಕ್ಕಿ ಮುರಿದ ಹರಿದ ನಕ್ಷತ್ರ ಜೂನ್…
-
ಹುಟ್ಟು ಕೇಳದೆಯೇ ಸಾವು ಕೇಳದೆಯೇನಡುವೆ ಸಮಯದೋಟನಿನ್ನೆ ನಾಳೆಯೊಳು ಕಳೆದು ಹೋಗುವರೆವಿರಳ ಇಂದು ನೋಟ ತಾಯಿ ತಂದೆಯರು ಬಂಧು ಬಾಂಧವರುಇಳಿಸಿದ ಪದ ನೂರುಸೊರುತಿಹುದು ನನ ಕಿವಿಯು ಜೋರುಮೆದುಳಿನ ಕಾರುಬಾರು ಅವರು ಎಡದವರು ಇವರು ಬಲದವರುಪರಚುತಿಹರು ಇವರವರನಾನು ನೀಚ ನೀವೆಲ್ಲ ಉಚ್ಛಕೆಳ ತಳ್ಳು ಉಳಿದ ಜನರ ಮಾಲಿಕಳ ಕೊಲೆ ಸಂಚು ಹೂಡುತಿದೆಮನೆಯ ನಾಲ್ಕು ಗೋಡೆಸಮಯ ಹಾರಿ, ನಿನ ಪ್ರಾಣ ತೀರದಿರೆನಂಬು, ನಿನ್ನ ಕಾಡೆ ಎಲ್ಲ ಬೇಲಿಗಳ ತಳ್ಳಿ ಸಾಗುತಿರೆಬಂತು ದೊಡ್ಡ ಬಯಲುಆದಿ ಅಂತ್ಯವದು ಇಲ್ಲವಾದ ತೆರೆನಕ್ಷೆಬರದ ಕಡಲು ಖಾಲಿ ಬಯಲಿನಲಿ…
-
ಕಾಲೊಳು ಸೇರಿದ ಮುಳ್ಳು, ನನ್ನೊಳಗೊಂದಾಗಿ ಕಳೆಯಿತು, ಹಲವು ವರ್ಷ. ಮುಳ್ಳೋ? ಎಸೆದು ಬಿಡು ಎಂಬುವರು ಎಲ್ಲರು. ಅದ್ಹೇಗೆ ಸಾಧ್ಯ? ನನ್ನ ಕಾಲು ಬೀಗಿ, ಕುಂಟುತ್ತಾ ನಡೆವಾಗಲೆಲ್ಲ, ಕುಂಟಿ ನಡೆದು ,ಮಾಂಸ ಖಂಡಗಳು ಸುಡುವಾಗಲೆಲ್ಲ, ಮುಳ್ಳೇ ಬಂದು ಸಾಂತ್ವನ ಹೇಳಿದ ಭಾವ. ಮುಳ್ಳಿಗೆ ಪದಗಳ ಮೇಲೆ ಹಿಡಿತವಿಲ್ಲ. ಹಿಡಿತವಿಲ್ಲವಾದರೂ ನನ್ನಂತೆ ಕವಯಿತ್ರಿ ಎಂದು ನಟಿಸುವುದಿಲ್ಲ. ಅದೆಷ್ಟು ಬಾರಿ ಬೇಸರದಿಂದ ಬಳಲಿದ್ದೇನೇ: ತನ್ನೆಲ್ಲವನ್ನು ಬಿಟ್ಟು , ನನ್ನ ಕಾಲು ಕೊಕ್ಕಿ ಅದೆಂತ ಹಿಂಸೆಯಾಗಬೇಕು, ಮುಳ್ಳಿಗೆ? ಮುಳ್ಳಿನ ಸಾಂಗತ್ಯ ನನ್ನ ಜೀವನದ…
-
ಮನೆಯ ಮಂದಿಯ ತೊರೆದು ಧನಕೆ ನೀರನು ಎರೆದು ಆಟ ಚೇಸ್ಟೆಯ ಮರೆಯೆ ನಿನ್ನ ಜಪ ತಪದಲಿ ಮುಳುಗಿರಲು ನೆನೆದು ಹೊರ ಮನದ ಮರಣವ ಕರೆದು ಒಳಗಿದಕೆ ತೆರಣವ ತರಿಸಿ ಕೈಹಿಡಿದು ಕರೆದೊಯ್ಯಬೇಕಿದೆ ಜೀವರಸವಾರುವಮುನ್ನವೇ ಹುಚ್ಚುತನವೆನ್ನುವರು ಕೆಲವರು ಏನನ್ನದೇ ನಕ್ಕು ನಡೆವವರು ಹಲವರು “ಎಲ್ಲಿಬಂದಿರುವ ? ಯಾರಿಗೊಲಿದಿರುವ? ಎಷ್ಟು ದೀಪವು ಆರಿದೆ ಮಂತ್ರಘೋಷದಲಿ!” ಸಾಸಿರದಲಿ ಸರ್ವರೂ ಬಾರೆನೆಂಬುವರೇ? ಜಪಿಸಿ ಜಪಿಸಿ ಉಸಿರನೆರೆವೆ ಕ್ಷಣಕೆ ಬಹಳ ಮೊದಲು ಎಂದಾದರೂ ಸಾಸಿರದಲಿ ಒಬ್ಬನೂ ಬಾರನೇ? ಮತ್ತೊಮ್ಮೆಯಿರಲಿ ಸಾಸಿರದಲಿ ಒಬ್ಬನೂ ಬಾರನೇ? ಬರೆದದ್ದು…
-
ಹರಿಯೇನು ಮಾಡಿಯಾನುನರರ ದಿನ ಕಲಹಕ್ಕೆಹರಿಯೇನು ಮಾಡಿಯಾನುನರರ ಮನ ಕಲಹಕ್ಕೆ! ಹರಿಯೇನೂ ಮಾಡದಿರೆಹರ ಬಂದು ಸಲಹುವನುಹರಿ-ಹರರಲೇನುಂಟುಕಲಹ ಮುಗಿದಿರಲು ! ಕಲಹ ಮುಗಿಯಿತು ಎನಲು“ಹರಿಯು ಹರ , ಹರನು ಹರಿಹರಿಹರರು ಒಬ್ಬರು ಇಬ್ಬರೆನೆ”ಸುರರ ತಲೆ ಕೆಡಲು ಶುರು. ತಪ್ಪು ಹರಿಯದೇ? ಹರನದೇ ?ಮಾತನಾಡುವ ನರನದೇಹೂವು ಬಾಡಿದರೆ, ತಪ್ಪು ಹೂವಿನದೆ?ಗಾಳಿಯದೇ , ಕುಳಿತ ದುಂಬಿಯದೆ ? ಇಲ್ಲ ಹರಿ-ಹರರದೇ?
-
ಸುಮ್ಮನೆ ಸರಿಯುವ ಕಾಲ ಹತ್ತು ಹನ್ನೊಂದು ಹನ್ನೆರಡರ ಓಟ ವಸುಧೆಯೇ ಕುಟುಂಬವಾಗಿ ಎಲ್ಲ ಸದಸ್ಯರುಪಸ್ಥಿತಿಯನರಿವ ಪರಿ! ಅವರು, ಇವರು, ತಿಳಿಯದವರನೂ ಮರೆಯದೇ ಪೊರೆವ ಹರಿ! ದಿನದಲೋ ಇಪ್ಪತ್ನಾಲ್ಕು ಗಂಟೆಗಳು ಅಲ್ಲಿ ಇಲ್ಲಿಗೆಂದು ಎಳೆದು ,ಉಳಿಯುವುದು ಒಂದು ಇಲ್ಲ ಎರಡು ಗಂಟೆಗಳು ಉಳಿಯುವುದೆಲ್ಲಿಯದು? ಉಳಿಸುವುದು. ಅಳಿದುಳಿದುದಕ್ಕೆ ಉಳಿಸದೇ ,ಉಳಿಸುವುದು. ತಣ್ಣಗಿನ ಮಣ್ಣಿನಲಿ ಹೂತು ಸಾಯುವ ಮೊದಲು ಭಯ ಬಿಸಿಲದ್ದಲ್ಲ! ಸುಡುವ ನೋವಿನದ್ದಲ್ಲ ! ಕೊರೆವ ಚಳಿಯದ್ದು. ಬೆತ್ತಲ ದೇಹಕ್ಕೆ ಬಡಿದು ಮರಗಟ್ಟಿಸಿ , ಸರುಟಿಸುವ ಸದ್ದಿಲ್ಲದ ಚಳಿಯದು! ಕಣ್ಣೀರು…
