ನೆಲದ ನಕ್ಷತ್ರ

ರಾತ್ರಿ ಕಳೆದು ಬೆಳಕು ಹರಿಯುವಲಿ

ರಾಶಿ ರಾಶಿ ನಕ್ಷತ್ರ

ಕಾಲದಲೆಯ ಇಳಿತ ಭರತದಲಿ

ಮಿಂದು ಮುರಿದ ನಕ್ಷತ್ರ


ಉಸಿರು ಬಸಿರು ನಿಂತ ಘಳಿಗೆ

ಕೆಸರು ಹೆಸರ ಮೇಲೆ ಕೆಳಗೆ

ನೀರು ಹೀರಿ ಗಾಳಿ ಹಾರಿ

ನಿರ್ವಾತವೆ ಕೊನೆಯ ದಾರಿ


ನೀರ ಅರಿಲ್ ನೆಲಕೆ ಬರಲ್

ದಾರಿಯೆಲ್ಲ ಅರಿಲ್ ಅರಿಲ್

ಹೊಕ್ಕ ನಾನು ದಾರಿಯಲ್ಲಿ

ಹೆಕ್ಕಿ ತಂದೆ ಸೀರೆಯಲ್ಲಿ


ನಕ್ಷತ್ರವು ನೆಲದ‌ ಮೇಲೆ

ಆಕರ್ಶಿತ ಜನರ ಸಾಲೆ

ಹೆಕ್ಕಿ‌ ನೆಕ್ಕಿ ನಡೆದು ಕುಕ್ಕಿ

ಮುರಿದ ಹರಿದ‌ ನಕ್ಷತ್ರ


ಜೂನ್ ೨೮, ೨೦೩೧

One response to “ನೆಲದ ನಕ್ಷತ್ರ”

  1. Title ತುಂಬಾನೆ ಇಷ್ಟ ಆಯಿತು…ನಾನು ನಿಮ್ಮ ಕನ್ನಡ and nim voice ge ದೊಡ್ಡ ಅಭಿಮಾನಿ…

Leave a Reply

Discover more from Trupthi Karanth Ramadeva

Subscribe now to keep reading and get access to the full archive.

Continue reading